ಯಶಸ್ವಿ ಕೆಲಸಗಾರರ ಪ್ರಮುಖ ಗುಣಲಕ್ಷಣಗಳು ಭಾಗ ೧. ಇಲ್ಲ ಎಂದು ಹೇಳಲು ನಿಮ್ಮ ಮನಸ್ಸನ್ನು ತರಬೇತಿ ಮಾಡಿ.

ಗೆಳೆಯ, ಗೆಳತಿಯರೇ, ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕೆಂದಿದ್ದರೆ ಹೇಳಿದ್ದಕ್ಕೆ ತಲೆಯಾಡಿಸುವುದನ್ನು ಮೊದಲು ಬಿಡಬೇಕು. ನೀವು ಮಾಡಿದ ಕೆಲಸಕ್ಕಿಂತ ಇಲ್ಲ ಎಂದು ಹೇಳುವ ಮೂಲಕ ಮಾಡದೇ ಬಿಟ್ಟ ಕೆಲಸಗಳ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಲೇಬೇಕಾಗಿದೆ. ಆಗಲೇ ನೀವು ಮಾಡಬೇಕೆಂದಿರುವ ಕೆಲಸದ ಬಗ್ಗೆ ತೀವ್ರ ಗಮನ ಹರಿಸಲು ಸಾಧ್ಯ ಮತ್ತು ನೀವು ಹೆಚ್ಚು ಯಶಸ್ಸನ್ನು ಕಾಣುತ್ತೀರಿ ನಿಮ್ಮ ಕೆಲಸದಲ್ಲಿ.