UC ಬರ್ಕ್ಲಿಯಲ್ಲಿ ಪ್ರಾಧ್ಯಾಪಕ ಮತ್ತು ಗ್ರೇಟ್ ಅಟ್ ವರ್ಕ್ ಲೇಖಕರಾದ ಮಾರ್ಟೆನ್ ಹ್ಯಾನ್ಸೆನ್ ಅವರ ಸಂಶೋಧನೆಯ ಪ್ರಕಾರ: ಯಶಸ್ವಿ ಕೆಲಸಗಾರರು ಕಡಿಮೆ ಕೆಲಸ ಮಾಡುತ್ತಾರೆ ಆದರೆಉತ್ತಮವಾಗಿ ಕೆಲಸ ಮಾಡುತ್ತಾರೆ ಮತ್ತು ಅದರ ಮೂಲಕ ಹೆಚ್ಚಿನದನ್ನು ಸಾಧಿಸುತ್ತಾರೆ, ಹೆಚ್ಚು ಕೆಲಸ ಮಾಡಬಾರದು ಎಂದು ಹೇಳಲು ಕಲಿಯುವುದು ನಮ್ಮ ಜವಾಬ್ದಾರಿಗಳನ್ನು ಕಡಿಮೆ ಮಾಡಲು ಮತ್ತು ನಮ್ಮ ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಕೊಡಲು ನಮಗೆ ಸಹಾಯ ಮಾಡುತ್ತದೆ. . ಹೆಚ್ಚುವರಿಯಾಗಿ, ಇಲ್ಲ ಎಂದು ಹೇಳಲು ಕಷ್ಟಪಡುವವರು ಅಪಾರ ಒತ್ತಡ, ಆ ಒತ್ತಡದಿಂದ ಭಸ್ಮವಾಗಿಬಿಡುತ್ತಾರೆ ಮತ್ತು ಕೊನೆಯಲ್ಲಿ ಖಿನ್ನತೆಯನ್ನು ಅನುಭವಿಸುವ ಸಾಧ್ಯತೆ ತುಂಬಾ ಹೆಚ್ಚು. ದಿವಂಗತ ಸ್ಟೀವ್ ಜಾಬ್ಸ್ ಈ ತಂತ್ರದ ದೊಡ್ಡ ಪ್ರತಿಪಾದಕರಾಗಿದ್ದರು.
ಫೋಕಸ್ ಎಂದರೆ ನೀವು ಗಮನಹರಿಸಬೇಕಾದ ವಿಷಯಕ್ಕೆ ಹೌದು ಎಂದು ಹೇಳುವುದು ಎಂದು ಜನರು ಭಾವಿಸುತ್ತಾರೆ. ಆದರೆ ಇದೇ ಪರಿಪೂರ್ಣ ಅರ್ಥವೆಂದು ತಿಳಿಯುವುದು ಬೇಡ. ಇರುವ ನೂರು ಇತರ ವಿಚಾರಗಳನ್ನು ಬೇಡ ಎಂದು ಹೇಳಲೇಬೇಕಾಗುತ್ತದೆ ಆ ಕೆಲಸಗಳು ಎಷ್ಟು ಒಳ್ಳೆಯದಾದರೂ ಸರಿ. ನೀವು ಎಚ್ಚರಿಕೆಯಿಂದ ಕೆಲಸಗಳನ್ನು ಆರಿಸಬೇಕಾಗುತ್ತದೆ. ನೀವು ಮಾಡಿದ ಕೆಲಸಗಳಂತೆ ನಾವು ಮಾಡದ ಕೆಲಸಗಳ ಬಗ್ಗೆಯೂ ನಿಮಗೆ ಹೆಮ್ಮೆ ಇರಬೇಕಾಗುತ್ತದೆ.
ಹೆಚ್ಚು ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವುದು ಅಥವಾ ಹೆಚ್ಚು ಗಂಟೆಗಳ ಕೆಲಸ ಮಾಡುವುದು ಹೆಚ್ಚು ಉತ್ಪಾದಕತೆಗೆ ಕಾರಣವಾಗುತ್ತದೆ ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ ಇದನ್ನು ನಾವು ಸತತವಾಗಿ ಗಮನಿಸಬೇಕಾದ ಅಂಶವಾಗಿದೆ. ಇದು ಸಂಪೂರ್ಣ ತಪ್ಪಾಗಿದೆ. ಹ್ಯಾನ್ಸೆನ್ ಪ್ರಕಾರ, “ನೀವು 50 ರಿಂದ 65 ಗಂಟೆಗಳ ಗಡಿಯನ್ನು ಸಮೀಪಿಸಿದಾಗ, ಆ ಹೆಚ್ಚುವರಿ ಗಂಟೆಗಳ ಪ್ರಯೋಜನಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ಒಮ್ಮೆ ನೀವು 65 ಗಂಟೆಗಳು ಅಥವಾ ಅದಕ್ಕಿಂತ ಹೆಚ್ಚು ಲಾಗ್ ಇನ್ ಮಾಡಿದರೆ, ನಿಮ್ಮ ಒಟ್ಟಾರೆ ಕಾರ್ಯಕ್ಷಮತೆ ಕುಸಿಯುತ್ತದೆ.”
ನೀವು ಹಲವಾರು ಕಾರ್ಯಗಳನ್ನು ಕುಶಲತೆಯಿಂದ ನಿರ್ವಹಿಸುತ್ತಿದ್ದರೆ ಮತ್ತು ನೀವು ಬಹುಕಾರ್ಯಕ ವಿಧಾನವನ್ನು ಬಳಸುತ್ತಿದ್ದರೆ, ಅದು ನಿಮ್ಮ ಕಾರ್ಯಕ್ಷಮತೆಯನ್ನು ಮತ್ತು ಅಂತಿಮವಾಗಿ ನಿಮ್ಮ ಕೆಲಸವನ್ನು ದೊಡ್ಡ ಅಪಾಯಕ್ಕೆ ತಳ್ಳುತ್ತದೆ ಎಂದು ಹ್ಯಾನ್ಸೆನ್ ಹೇಳುತ್ತಾರೆ. “ಅತ್ಯುತ್ತಮವಾದ ಕೆಲಸಕ್ಕೆ ಗಮನ ಬೇಕು, ಮತ್ತು ಗಮನಕ್ಕೆ ಹಲವು ವಿಷಯಗಳ ಬಗ್ಗೆ ಇಲ್ಲ ಎಂದು ಹೇಳುವ ಮೂಲಕ ಆ ಕೆಲಸಗಳನ್ನು ಕೈಬಿಡುವ ಅಗತ್ಯವಿರುತ್ತದೆ” ಎಂದು ಹ್ಯಾನ್ಸೆನ್ ಹೇಳುತ್ತಾರೆ.
ಆದ್ದರಿಂದ ಗೆಳೆಯ, ಗೆಳತಿಯರೇ, ನೀವು ನಿಮ್ಮ ಕೆಲಸದಲ್ಲಿ ಯಶಸ್ಸು ಗಳಿಸಬೇಕೆಂದಿದ್ದರೆ ಹೇಳಿದ್ದಕ್ಕೆ ತಲೆಯಾಡಿಸುವುದನ್ನು ಮೊದಲು ಬಿಡಬೇಕು. ನೀವು ಮಾಡಿದ ಕೆಲಸಕ್ಕಿಂತ ಇಲ್ಲ ಎಂದು ಹೇಳುವ ಮೂಲಕ ಮಾಡದೇ ಬಿಟ್ಟ ಕೆಲಸಗಳ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಯಲೇಬೇಕಾಗಿದೆ. ಆಗಲೇ ನೀವು ಮಾಡಬೇಕೆಂದಿರುವ ಕೆಲಸದ ಬಗ್ಗೆ ತೀವ್ರ ಗಮನ ಹರಿಸಲು ಸಾಧ್ಯ ಮತ್ತು ನೀವು ಹೆಚ್ಚು ಯಶಸ್ಸನ್ನು ಕಾಣುತ್ತೀರಿ ನಿಮ್ಮ ಕೆಲಸದಲ್ಲಿ. ಆಪಲ್ ಕಂಪನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಸ್ಟೀವ್ ಜಾಬ್ ರವರೇ ಇದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ.
ಇಷ್ಟವಾಗದೇ ಇದ್ದರೆ ಅದನ್ನು ಕಾಮೆಂಟ್ ಮೂಲಕ ತಿಳಿಸಿ. ಅದರಿಂದ ನಮ್ಮನ್ನು ನಾವು ಉತ್ತಮ ಪಡಿಸಿಕೊಂಡು ನಿಮಗೆ ಇನ್ನೂ ಉತ್ತಮ ಸೇವೆ ಕೊಡಲು ಅನುಕೂಲವಾಗುತ್ತದೆ.
ಮಿಡಿಗಾಯಿ, ದೊರೆಗಾಯಿಗೆ ಉತ್ತರಿಸಿ